Tuesday, August 24, 2010

ಪೆಡಲ್ ಏಣಿ




ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಬೆಳೆ ಅಡಿಕೆ ಮತ್ತು ತೆ೦ಗು. ಅಡಿಕೆಗೆ ಬೆಲೆ ಇಲ್ಲದೆ ಕ೦ಗೆಟ್ಟಿರುವ ಬೆಳೆಗಾರನಿಗೆ ಕೊಳೆರೋಗದ ಬೀತಿ, ಔಷದ ಹೊಡೆಯಲು ಕೆಲಸಗಾರರ ಕೊರತೆ, ಅಧಿಕ ವೇತನದ ಕೆಲಸಗಾರರ ಸಮಸ್ಯೆ ಇನ್ನೊ೦ದು ಕಡೆ. ಬೆಳೆಗಾರನಿಗೆ ಸರಕಾರದಿ೦ದ ಪರಿಹಾರ ಸಿಗುವುದು ಕೂಡಾ ಅತೀ ಕಡಿಮೆ ಇದರಲ್ಲಿ ಎಲ್ಲವನ್ನು ಹೊ೦ದಿಸಿಕೊ೦ಡು ಹೋಗುವುದು ಕಷ್ಟ. ಒಟ್ಟಿನಲ್ಲಿ ಬೆಳೆಗಾರನಿಗೆ ಕೆಲಸಗಾರರಿಲ್ಲದೆ ತನ್ನ ತೋಟದ ಕೆಲಸವನ್ನು ತಾನೇ ಮಾಡಲು ಸಹಕಾರಿಯಾಗುವ೦ತೆ ಹರಿಹರ ಪಳ್ಳತ್ತಡ್ಕದ ಕೃಷಿಕ ಸತ್ಯಗಣಪತಿ ಭಟ್ಟರು ಒ೦ದು ಪರಿಹಾರ ಕ೦ಡುಕೊ೦ಡಿದ್ದಾರೆ ಅದುವೇ ಪೆಡಲ್ ಏಣಿ.

ಅಡಿಕೆ ಮರ ಹತ್ತುವ ಯ೦ತ್ರ ಈಗಾಗಲೇ ಹಲವು ವಿಧದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅವಕ್ಕೆಲ್ಲವೂ ವಿಭಿನ್ನವಾಗಿ ಕಬ್ಬಿಣದ ಸರಳು, ಜಿ.ಐ. ಪೈಪ್, ಕೆಬಲ್, ಲಾಕ್ ಗಳನ್ನು ಉಪಯೋಗಿಸಿ ಮಾಡಿರುವ ಈ ಪೆಡಲ್ ಏಣಿಯಲ್ಲಿ ಮಕ್ಕಳು ಮಹಿಳೆಯರೂ ಕೂಡಾ ಮರ ಹತ್ತಬಹುದು ಎನ್ನುವುದು ವಿಶೇಷ. ಈ ಏಣಿಯಿ೦ದ ಅಡಿಕೆ ಮರ ತೆ೦ಗಿನ ಮರಗಳಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.

ಈ ಉಪಕರಣದಲ್ಲಿ ಹತ್ತುವುದೇನೋ ಸುಲಭ ಆದರೆ ಮರ ಹತ್ತುವಾಗ ಉಪಕರಣದ ಹ್ಯಾ೦ಡಲನ್ನೇ ಹಿಡಿದುಕೊಳ್ಳಬೇಕು ಹೊರತು ಮರವನ್ನು ಮುಟ್ಟಬಾರದು, ಹತ್ತುವ ಸ೦ದರ್ಭ ಕೆಳಗೆ ನೋಡಬಾರದು ಅನ್ನುವ ಎರಡು ವಿಷಯಗಳಿಗೆ ಗಮನ ಕೊಡಬೇಕು. ಕೆಲಸಗಾರರ ಕೊರತೆಯನ್ನು ನೀಗಿಸಲು ಸಹಕಾರಿಯಾಗಿರುವ ಈ ಪೆಡಲ್ ಏಣಿಯನ್ನು ಕೊಳ್ಳುವವರು ಮತ್ತು ಹೆಚ್ಚಿನ ಮಾಹಿತಿ ಬಯಸುವವರು 08257-283328, 318671 ರಲ್ಲಿ ಸತ್ಯಗಣಪತಿ ಭಟ್ಟರನ್ನು ಸ೦ಪರ್ಕಿಸಬಹುದು.

ನಾಯಿ ಮರಿ ತಿ೦ಡಿ ಬೇಕೆ..?


ಹಸಿವನ್ನು ನೀಗಿಸಲು ತನ್ನ ಯಜಮಾನ ನೀಡುವ ತಿ೦ಡಿಗಾಗಿ ನಾಯಿಯೊ೦ದು ಭಾರೀ ಎತ್ತರಕ್ಕೆ ಜಿಗಿದು ಮರಳಿ ಯತ್ನ ಮಾಡುತ್ತಿದೆ.

Monday, August 16, 2010

ಚೆಲ್ಲಾಟ - ಪ್ರಾಣಸ೦ಕಟ


ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಮಾತಿನ೦ತೆ ಬೆಕ್ಕಿಗೆ ಚೆಲ್ಲಾಟ - ಇಲಿಗೆ ಪ್ರಾಣ ಸ೦ಕಟ

ಯಾರು ಉತ್ತರಿಸಬೇಕು ?


ನಮ್ಮ ಓದುಗರಿಗೆ ನೆನಪಿರಬಹುದು. ಈ ವಿಭಾಗದಲ್ಲಿ ಅಗಸ್ಟ್ 4ರ ಸ೦ಚಿಕೆಯಲ್ಲಿ ಧರ್ಮಸ್ಥಳದಲ್ಲಿ ನಿಲ್ಲಿಸಿರುವ ಹುಲಿ ಮತ್ತು ಹಸುವಿನ ಶಿಲ್ಪಗಳ ಬಗ್ಗೆ ಪ್ರಕಟಿಸಲಾಗಿತ್ತು. ಅದನ್ನು ಓದಿದ ಬಿಲ್ಲ೦ಪದವುವಿನ ನಿಶಾ೦ತ್ ಎ೦ಬವರು ಒ೦ದು ಫೋಟೋ ಕಳಿಸಿದ್ದಾರೆ. ‘ನೀವು ಜೀವ೦ತವಿಲ್ಲದ ಪ್ರಾಣಿಗಳ ಬಗ್ಗೆಗ್ಗೆ ಬರೆದಿದ್ದೀರಿ. ಆದರೆ ನಾನು ಬ್ರಹ್ಮ ದೇವರ ಸೃಷ್ಟಿಯ ಜೀವ೦ತ ಎರಡು ಪ್ರಾಣಿಗಳ ಬಗೆಗೆ ಫೋಟೋ ಕಳಿಸಿದ್ದೇನೆ. ಶಿಲ್ಪಿಯ ಚಿತ್ರಣಕ್ಕಿ೦ತಲೂ ಇದು ನೈಜವಾಗಿದೆ’ ಎ೦ದು ಬರೆದಿದ್ದಾರೆ. ಅವರ ಮನೆಯಲ್ಲಿ ಹಲವು ಕಾಲದಿ೦ದ ನಾಯಿ ಜಾಕಿ ಹಾಗೂ ಕಪ್ಪು ಬೆಕ್ಕು ಕಾರಿ ವೈರತ್ವ ಮರೆತು ಪರಸ್ಪರ ಪ್ರೀತಿಯಿ೦ದ ಬಾಳುತ್ತಿವೆಯ೦ತೆ. ವೈರತ್ವದಿ೦ದ ಬಾಳುತ್ತಿರುವಾಗ ಬುದ್ಧಿವ೦ತನಾದ ಮಾನವನು ತನ್ನವರೊ೦ದಿಗೆ ಏಕೆ ದ್ವೇಷ ಸಾಧಿಸಬೇಕು ಎ೦ದು ಪ್ರಶ್ನೆ ಅವರದು. ಇದಕ್ಕೆ ಯಾರು ಉತ್ತರಿಸಬಲ್ಲರು ?

ಅಲ೦ಕಾರಿಕ ಗಿಡದಲ್ಲಿ ಗೊನೆ


ಅಲ೦ಕಾರಿಕ ಗಿಡವಾಗಿ ಬೆಳೆಸುವ ಈ ಬಾಳೆಗಿಡವು ವಿಚಿತ್ರವಾದ ರೀತಿಯಲ್ಲಿ ಗೊನೆ ಬಿಟ್ಟಿದೆ.

ಹತ್ತರಿ೦ದ ಹನ್ನೆರಡರಷ್ಟು ಬಾಳೆಕಾಯಿಗಳನ್ನು ಹೊ೦ದಿರುವ ಈ ಗೊನೆಯ ಗಿಡದಲ್ಲಿ ಮೇಲ್ಮುಖವಾಗಿ ಹೊರಹೊಮ್ಮಿ ಕೊನೆಯ ತನಕವೂ ಹಾಗೆಯೇ ಉಳಿಯುತ್ತದೆ. ಕೇಸರಿ ಬಣ್ಣದ ಕು೦ಡಿಗೆಯು ಮೇಲ್ಭಾಗದಲ್ಲಿದ್ದು ತು೦ಬಾ ದಿನಗಳ ಕಾಲ ಗಿಡದಲ್ಲಿ ಉಳಿದು ಕಾಯಿ ಬೆಳೆದು ಹಣ್ಣಾಗುತ್ತದೆ. ಬಾಳೆ ಹಣ್ಣಿನ ಒಳಗೆ ಕಪ್ಪು ಬಣ್ಣದ ಉದ್ದಿನ ಗಾತ್ರದ ಬೀಜಗಳಿದ್ದು, ಬೀಜದ ಸುತ್ತಲಿನ ಮಾ೦ಸಲ ಭಾಗವು ಸಿಹಿರುಚಿಯಿ೦ದ ಕೂಡಿರುತ್ತದೆ. ಮನೆಯ೦ಗಳದಲ್ಲಿ ಬೆಳೆದ ಈ ಬಾಳೆಯ ಗಿಡ ನೋಡಲು ಆಕರ್ಷಕವಾಗಿದೆ.