Wednesday, September 21, 2011

ಕೊಳೆರೋಗಕ್ಕೆ ಸಾವಯವ ಮಿಶ್ರಣ



ಅಡಿಕೆಯ ಕೊಳೆರೋಗಕ್ಕೆ ಸಾಮಾನ್ಯವಾಗಿ ಬೋರ್ಡೋ ದ್ರಾವಣದ ಮಿಶ್ರಣವನ್ನು ಸಿಂಪಡಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಬಯೋ ಫೈಟ್, ಬಯೋ ಪಾಟ್‌ನಂತಹ ರಾಸಾಯನಿಕಗಳು ಮಾರುಕಟ್ಟೆಯಲ್ಲಿ ಲಭ್ಯ ಜೊತೆಗೆ ಇವು ಬೋರ್ಡೋ ಮಿಶ್ರಣಕ್ಕಿಂತ ಹೆಚ್ಚು ಪ್ರಯೋಜನಕಾರಿಯಾದರೂ ಅಡಿಕೆಯ ಏರಿಳಿತದ ಬೆಲೆಯಿಂದ ಬೆಳೆಗಾರ ಕಡಿಮೆ ಬೆಲೆಯ ಯಾವ ಯಾವ ಮಿಶ್ರಣ ಬಳಸಿದರೆ ಕೊಳೆರೋಗ ನಿಯಂತ್ರಣದಲ್ಲಿರುತ್ತದೆ ಅನ್ನೋ ಪ್ರಯೋಗಗಳನ್ನು ಬೆಳೆಗಾರ ಮಾಡುತ್ತಲ್ಲೇ ಇರುತ್ತಾನೆ. ಅಂತ ಪ್ರಯೋಗವೊಂದನ್ನ ಕಳೆದ ಎರಡು ವರ್ಷಗಳಿಂದ ಸುಳ್ಯ ತಾಲೂಕಿನ ಮೂಲೆಮನೆ ಬಿ. ನರಸಿಂಹ ಭಟ್ಟರು ಮಾಡಿ ಯಶಸ್ವಿ ಕಂಡುಕೊಂಡಿದ್ದಾರೆ. ಈ ಮಿಶ್ರಣ ಸಂಪೂರ್ಣವಾಗಿ ಸಾವಯವವಾಗಿದ್ದು ಈ ಮಿಶ್ರಣ ಸಿಂಪಡಿಸಿದ ಅಡಿಕೆಯ ಗುಣಮಟ್ಟವೂ ಉತ್ತಮವಾಗಿದೆಯೆಂದು ಸಾವಯವ ತಜ್ಞರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


ಏನೇನಿದೆ ಈ ಮಿಶ್ರಣದಲ್ಲಿ..?

ಗೋಮೂತ್ರ 5 ಲೀಟರ್
ಹುಳಿ ಮಜ್ಜಿಗೆ 3 ಲೀಟರ್
ಕಪ್ಪು ಬೆಲ್ಲ 1 1/2 ಕೆ.ಜಿ.
ಸುಣ್ಣ 1 ಕೆ.ಜಿ.
ನೀರು 200 ಲೀಟರ್


ಬಳಸುವ ವಿಧಾನ

ತಯಾರು ಮಾಡಿದ ಮಿಶ್ರಣವನ್ನು ತಕ್ಷಣವೇ ಬಳಸಬಹುದು ಅಥವಾ ಒಂದುವಾರದ ತನಕ ಇಟ್ಟರೂ ಮಿಶ್ರಣ ತನ್ನ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳೋದಿಲ್ಲ ಮತ್ತು 40 ರಿಂದ 50 ದಿನಗಳಿಗೊಮ್ಮೆ ಈ ಮಿಶ್ರಣವನ್ನು ಅಡಿಕೆ ಮರಗಳಿಗೆ ಸಿಂಪಡಿಸಿದರೆ ಸಾಕೆಂಬುದನ್ನ ನರಸಿಂಹ ಭಟ್ಟರು ತನ್ನ ಸ್ವಾನುಭವದಿಂದ ಕಂಡುಕೊಂಡಿದ್ದಾರೆ.

ವಿಳಾಸ :

ಬಿ.ನರಸಿಂಹ ಭಟ್ಟ ಮೂಲೆಮನೆ
ಅಂಚೆ : ಕಲ್ಮಡ್ಕ, ಸುಳ್ಯ ತಾಲೂಕು ದ.ಕ.– 574212
ದೂರವಾಣಿ: 08257-270039 (ಸಂಪರ್ಕ ಸಮಯ ರಾತ್ರಿ 7 ರಿಂದ 10 ರವರೆಗೆ)

No comments:

Post a Comment